ಅರ್ಜುನ್ ಕಾಪಿಕಾಡ್ ಇವರು ತುಳು ಚಲನಚಿತ್ರ ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟ. = ಜನನ = ಅರ್ಜುನ್ ಕಾಪಿಕಾಡ್ ಇವರು ಫೆಬ್ರವರಿ ೨ ೧೯೯೦ ರಂದು ಮಂಗಳೂರಿನ ತುಳು ಮಾತನಾಡುವ ಕುಟುಂಬವೊಂದರಲ್ಲಿ ಜನಿಸಿದರು. = ಜೀವನ = ಅವರ ತಂದೆ ಜನಪ್ರಿಯ ತುಳು ನಾಟಕ ಮತ್ತು ತುಳು ಸಿನಿಮಾ ಕಲಾವಿದ, ದೇವ್‍ದಾಸ್ ಕಾಪಿಕಾಡ್, ಅವರ ತಾಯಿ ಶರ್ಮಿಳಾ ಕಾಪಿಕಾಡ್. ಇವರು ಮಂಗಳೂರಿನ ಎಸ್.ಡಿ.ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಎಂಬಿಎ ಪದವಿಯನ್ನು ಪಡೆದರು. ಇತ್ತೀಚಿಗೆ ಅರ್ಜುನ್ ರವರು ಕಾವ್ಯಾಳನ್ನು ವಿವಾಹವಾದರು. = ಸಿನಿಮಾಗಳು = = ಪ್ರಶಸ್ತಿಗಳು = ರೆಡ್ ಎಫ್ಎಂ ತುಳು ಚಲನಚಿತ್ರ ಪ್ರಶಸ್ತಿ, ೨೦೧೪ - ತೆಲಿಕೆದ ಬೊಳ್ಳಿ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ. ತುಳು ಸಿನಿಮೋತ್ಸವ ಪ್ರಶಸ್ತಿ,೨೦೧೫ - ರಂಗ್ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ (ಸಾರ್ವಜನಿಕ ಆಯ್ಕೆ). ತುಳು ಸಿನಿಮೋತ್ಸಮ ಪ್ರಶಸ್ತಿ, ೨೦೧೫ - ಬೆಸ್ಟ್ ಎಮರ್ಜಿಂಗ್ ಆಕ್ಟರ್. == ಉಲ್ಲೇಖಗಳು ==